ಜಯಮಂಗಳಂ ನಿತ್ಯ ಶುಭಮಂಗಳಂ

ಜಯಮಂಗಳಂ ನಿತ್ಯ ಶುಭಮಂಗಳಂ
ಯೋಗೀಂದ್ರತೀರ್ಥಕರ ರಾಜೀವ ಪೂಜಿತಗೆ
ಭಾಗವತಜನ ಪ್ರಿಯರೆನಿಸುವರಿಗೆ
ಯೋಗಿಗಳ ಅಧಿಪತಿ ಸುಧೀಂದ್ರಕರಜಾತರಿಗೆ
ಬಾಗಿ ವಂದಿಪರ ಸಲಹುವ ಸ್ವಾಮಿಗೆ || ೧ ||
ವರಹಜಾತೀರ ಮಂತ್ರಾಲಯ ನಿಕೇತನಗೆ
ಧರಣಿಯೊಳಗ ಅಪ್ರತಿಮ ಚರಿತೆ ತೋರ್ವರಿಗೆ
ಕುರುಡ ಕಿವುಡಾದಿಗಳ ಬಯಕೆ ಪೂರೈಪರಿಗೆ
ವರ ಸುವೃಂದಾವನದಿ ಶೋಭಿಪರಿಗೆ || ೨ ||
ಆರಾಧನೆಯ ಜನರು ಮಾಡುವುದು ನೋಡಲಿಕೆ
ವಾರವಾರಕ್ಕಧಿಕವೆನಿಸುವರಿಗೆ
ಮಾರಮಣ ಪ್ರಾಣೇಶವಿಠಲನಂಘ್ರಿ ಜಲಜಕೆ
ಆರುಪದವೆನಿಪಗೆ ಕರುಣಾಜಲಧಿಗೆ || ೩ ||

Leave a Reply

Your email address will not be published. Required fields are marked *